ಹೊನ್ನುಟಗಿಯಲ್ಲಿ ಶ್ರೀ ಮಲ್ಲಿಕಾರ್ಜುನ ನೂತನ ದೇವಸ್ಥಾನ ಲೋಕಾರ್ಪಣೆ 🔥| ಭವ್ಯ ಮೆರವಣಿಗೆ | Praja Dhvani News
ವಿಜಯಪುರ ತಾಲೂಕು ಸುಕ್ಷೇತ್ರ ಹೊನ್ನುಟಗಿ ಗ್ರಾಮದಲ್ಲಿ ಶ್ರೀ ಮಲ್ಲಿಕಾರ್ಜುನ ನೂತನ ದೇವಸ್ಥಾನದ ಲೋಕಾರ್ಪಣೆ, ಮೂರ್ತಿ ಪ್ರತಿಷ್ಠಾಪನೆ ಮತ್ತು ಕಳಸಾರೋಹಣ ಭಕ್ತಿಭಾವದಿಂದ ನೆರವೇರಿತು.
ಸಕಲ ವಾದ್ಯ ವೈಭವದೊಂದಿಗೆ ಶ್ರೀ ಮಲ್ಲಿಕಾರ್ಜುನ ಮೂರ್ತಿ & ಕಳಸ ಪಲ್ಲಕ್ಕಿಯ ಭವ್ಯ ಮೆರವಣಿಗೆ,ಗ್ರಾಮದ ಪ್ರಮುಖ ರಸ್ತೆಗಳಿಂದ ದೇವಸ್ಥಾನದವರೆಗೆ ಸಾಗಿತು.
ಡೊಳ್ಳು, ಭಜಂತ್ರಿ, ಪೂರವಂತರು, ವೀರ ಬದ್ರದೇವರ ಕಸರತ್ತು, ಮತ್ತು ಸುಮಂಗಲೆಯರ ಕುಂಭ ಕಳಸ ಮೆರವಣಿಗೆ— ಗ್ರಾಮದ ಜನರನ್ನು ಮೂಕವಿಸ್ಮಿತರನ್ನಾಗಿಸಿತು.
ಗ್ರಾಮದಲ್ಲಿ ಭಕ್ತಿ–ಭಾವ–ಸಡಗರದ ವಾತಾವರಣ ಹಬ್ಬದ ಸಂಭ್ರಮ ಮೂಡಿಸಿತು. ದಿವ್ಯ ಸಾನ್ನಿಧ್ಯ:
✔ ಶ್ರೀ ವಿಶ್ವಪ್ರಭುದೇವ ಶಿವಾಚಾರ್ಯರು (ಸಾರಂಗಮಠ)
✔ ಯೋಗೆಸ್ವೇರಿ ತಾಯಿ (ಆರೂಢ ಆಶ್ರಮ)
✔ ಸಂಗೀತ ಮಾತಾಜಿ
✔ ಶ್ರೀ ಶಶಿಕಾಂತ್ ಗುರುಜಿ (ಇಂಚಗೇರಿ ಮಠ) ಅಧ್ಯಕ್ಷತೆ:
✔ ಮಾನ್ಯ ಶ್ರೀ ವಿಠಲ್ ಕಟಕದೊಂಂಡಿ ಉದ್ಘಾಟನೆ:
✔ ಉಮೇಶ ಕಾರಕೋಳ ಮುಖ್ಯ ಅತಿಥಿಗಳು:
✔ ಬಸನಗೌಡ ಪಾಟೀಲ್ ಯತ್ನಾಳ್
✔ ಸುಶೀಲಾ ಬಾಯಿ ಬಿರಾದಾರ
✔ ಸಾವಿತ್ರಿ
✔ ಪ್ರಫುಲ್ ಕುಮಾರ ಮಂಗಣವರ್
✔ ರಾಜುಗೌಡ ಬಿ. ಪಾಟೀಲ್
✔ ಮಹಲ್ ಐನಾಪುರ ಗಂಗಯ್ಯ ಸ್ವಾಮಿಗಳು
ಗ್ರಾಮದ ಗುರು ಹಿರಿಯರು, ಯುವಕರು, ವಿದ್ಯಾರ್ಥಿಗಳು ಭಾರೀ ಸಂಖ್ಯೆಯಲ್ಲಿ ಪಾಲ್ಗೊಂಡರು.
ವರದಿ: ಚಿದಾನಂದ ಭೀ ಉಪ್ಪಾರ
ಪ್ರಜಾ ಧ್ವನಿ – ದೇವರಹಿಪ್ಪರಗಿ

