ಸಿಸಿ ರಸ್ತೆ 40 ಲಕ್ಷದ ವೆಚ್ಚದ ಕಾಮಗಾರಿಯ ಕಳಪೆ

ಕೆ ಆರ್ ಐ ಡಿ ಎಲ್ ವತಿಯಿಂದ ನಡೆಯುತ್ತಿರುವ ಸಿಸಿ ರಸ್ತೆ 40 ಲಕ್ಷದ ವೆಚ್ಚದ ಕಾಮಗಾರಿಯ ಕಳಪೆ ಹೂವಿನ ಹಿಪ್ಪರಗಿ ಗ್ರಾಮ

LOCAL NEWS

Gangadhar Engaleshwar

4/6/20241 min read

ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಹೂವಿನ ಹಿಪ್ಪರಗಿ ಗ್ರಾಮದ ಡಾಕ್ಟರ್ ಬಸವರಾಜ್ ನಗರ್ ನಲ್ಲಿ ಕೆ ಆರ್ ಐ ಡಿ ಎಲ್ ಅಥವಾ ಭೂ ಸೇನಾ ನಿಗಮ ವತಿಯಿಂದ ನಡೆಯುತ್ತಿರುವ ಸಿಸಿ ರಸ್ತೆಯು ಯಾವುದೇ ಎಸ್ಟಿಮೇಟ್ ಪ್ರಕಾರ ಕಾಮಗಾರಿ ನಡೆಯುತ್ತಿಲ್ಲ ಸುಮಾರು ಅಂದಾಜು 40 ಲಕ್ಷದ ವೆಚ್ಚದ ಕಾಮಗಾರಿಯು ಸರಿಯಾಗಿ ಜಲ್ಲಿಕಲ್ಲು ಸ್ಟೋನ್ ಮಿಕ್ಸರ್ ರೋಲಿಂಗ್ ಮಾಡದೆ ಕಳಪೆ ಸಿಮೆಂಟ್ ಹಾಗೂ ಕಳಪೆ ಮಣ್ಣು ಮಿಶ್ರಿತ ಉಸುಗು ಪ್ಲಾಸ್ಟಿಕ್ ಹೊದಿಕೆ ಇಲ್ಲದೆ ನೆಲದ ಮೇಲೆ ಕಾಂಕ್ರೀಟ್ ಹಾಕಿ ಅನುದಾನವನ್ನು ಸಂಬಂಧಪಟ್ಟ ಅಧಿಕಾರಿಗಳಾದ AEE ಹಾಗೂ ಇಂಚಾರ್ಜ ಆದ EE ಆನಂದ್ ರವರು ಸಿಸಿ ರಸ್ತೆಯ ನಿಯಮಗಳನ್ನು ಗಾಳಿಗೆ ತೂರಿ ಅನುದಾನ ದುರುಪಯೋಗ ಮಾಡಿದ್ದು ಕಳಪೆ ಕಾಮಗಾರಿ ಮಾಡಿ ಅನುದಾನ ಕೊಳ್ಳೆ ಹೊಡೆದಿರುತ್ತಾರೆ.