371ಜೆ ಸೆಕ್ಷನ್ ಅಡಿಯಲ್ಲಿ ನಮ್ಮ ವಿಜಯಪುರ ಜಿಲ್ಲೆಯನ್ನು ಸಹ ಸೇರ್ಪಡೆ ಮಾಡ್ತಾರಾ?
VIJAYAPURALOCAL NEWS
ಇಂದು ಕರವೇ ಸ್ವಾಭಿಮಾನಿ ಬಣ ವಿಜಯಪುರ ಎಲ್ಲಾ ಪದಾಧಿಕಾರಿಗಳು ಕೂಡಿ ಮಾನ್ಯ ಜಿಲ್ಲಾಧಿಕಾರಿಗಳು ವಿಜಯಪುರ ಇವರ ಮೂಲಕ ಮಾನ್ಯ ರಾಜ್ಯಪಾಲರು ಕರ್ನಾಟಕ ಸರ್ಕಾರ ಮತ್ತು ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಕರ್ನಾಟಕ ಸರ್ಕಾರ ಇವರಿಗೆ ನಮ್ಮ ಸಂಘದ ಮನವಿ ಏನೆಂದರೆ 371ಜೆ ಸೆಕ್ಷನ್ ಅಡಿಯಲ್ಲಿ ನಮ್ಮ ವಿಜಯಪುರ ಜಿಲ್ಲೆಯನ್ನು ಸಹ ಸೇರ್ಪಡೆ ಮಾಡಿ, ನಮ್ಮ ಜಿಲ್ಲೆಗೆ ಹಾಗೂ ಜಿಲ್ಲಾ ವಿದ್ಯಾರ್ಥಿಗಳಿಗೆ ಅನ್ಯಾವಾಗಿದೆ, ನಮ್ಮ ಜಿಲ್ಲೆ ಹಿಂದುಳಿದ ಪ್ರದೇಶವಾಗಿದೆ ಅದಕ್ಕೆ ನಮ್ಮ ಜಿಲ್ಲೆಯನ್ನು ಸಹ 371ಜೆ ಸೆಕ್ಷನ್ ಅಡಿಯಲ್ಲಿ ಸೇರ್ಪಡೆ ಮಾಡಿ ಅನ್ಯಾಯವನ್ನು ಸರಿಪಡಿಸಿ ಎಂದು ಮನವಿ ಕೊಡಲಾಗಿತು, ಇದಕ್ಕೆ ಸಾರ್ವಜನಿಕರ ಸಹಕಾರ ಅತೀ ಮುಖ್ಯವಾಗಿದೆ, ದಯವಿಟ್ಟು ಎಲ್ಲರೂ ಸಹಕಾರ ಕೊಡ್ರಿ, ನಮ್ಮ ನಿಮ್ಮೆಲ್ಲರ ಮಕ್ಕಳ ಭವಿಷ್ಯ ಉಜ್ವಲವಾಗಲಿ, ಇಂತಿ ತಮ್ಮ ಕರವೇ ಜಿಲ್ಲಾ ಉಸ್ತುವಾರಿ ಅಧ್ಯಕ್ಷರು ರಾಜಶೇಖರ್ ಹುಲ್ಲೂರ್ ಹಾಗೂ ಎಲ್ಲಾ ಪದಾಧಿಕಾರಿಗಳ ವಿನಂತಿ.

