ಸಿಂದಗಿ ಪಿಡಬ್ಲ್ಯೂಡಿ ಕಚೇರಿಯ ಗೈರು ಸಿಬ್ಬಂದಿ ಕಚೇರಿ ಖಾಲಿ! | Praja Dhvani News
LATEST_NEWSLOCAL NEWSACTIVISM
ಸಿಂದಗಿ ಲೋಕೋಪಯೋಗಿ (PWD) ಇಲಾಖೆಯಲ್ಲಿ ಮತ್ತೆ ಗೈರು ಹಾಜರಾತಿ, ಅಸಡ್ಡೆತನ, ಸಾರ್ವಜನಿಕರಿಗೆ ಉತ್ತರ ಕೊಡದ ವರ್ತನೆ
ಸಮಯ 11 ಆದರೂ ಕಚೇರಿಗೆ ಹಾಜರಾಗದ ಲೋಕೋಪಯೋಗಿ ಸಿಬ್ಬಂದಿ.
ಈ ಬಗ್ಗೆ ಸಾರ್ವಜನಿಕರು ಯಾರು ಅವರನ್ನು ಪ್ರಶ್ನಿಸುವಂತಿಲ್ಲ, ಪ್ರಶ್ನಿಸಿದರೆ ಧಮಕಿ ಹಾಕುವ ಸಿಬ್ಬಂದಿ.
10:00 ಬಾಗಿಲು ತೆಗೆದು ಹೋದರೆ ಮತ್ತೆ ಕಚೇರಿಗೆ ಮರಳುವುದು ನೆನಪಾದಾಗಲೆ.
ಈ ಬಗ್ಗೆ ಪ್ರಶ್ನಿಸಿದ್ದಕ್ಕೆ ಅಸಡ್ಡೆತನದಿಂದಲೇ ಉತ್ತರಿಸುವ ಸಿಬ್ಬಂದಿ.
10 ಗಂಟೆಗೆ ಕೋರ್ಟಿಗೆ ಹೋಗಿರುವೆ, ತಹಶೀಲ್ದಾರ್ ಕಚೇರಿಗೆ ಹೋಗಿರುವ, ಎಂದು ಸುಳ್ಳು ಉತ್ತರವನ್ನು ನೀಡುತ್ತಾರೆ.
ಕಚೇರಿಯ ಕೀ ತೆಗೆದು ಹೋದರೆ ಮತ್ತೆ ಬರುವುದು 11 ಗಂಟೆಗೋ ಅಥವಾ 12 ಗಂಟೆ ಆಗುತ್ತೆ, ಅವರಿಗೆ ಗೊತ್ತು.
ಸತತ 1 ವಾರದಿಂದ ನಮ್ಮ ತಂಡ ಪರೀಕ್ಷಿಸುತ್ತಿದ್ದು, ಸಿಬ್ಬಂದಿಗದ್ದು ದಿನ ಅದೇ ಅದೇ ರಾಗ ಅದೇ ಹಾಡು.
ಈ ಬಗ್ಗೆ ಸಹಾಯಕ ಇಂಜಿನಿಯರ್ ಶ್ರೀ ಅರುಣ್ ಕುಮಾರ್ ರವರಿಗೆ ಕೇಳಿದಾಗ ಕೊಟ್ರಸಲ್ಲಿ ಮನೆ ಇದೆ ಮನೆಯಲ್ಲಿ ಇರುತ್ತಾರೆ ಬರುತ್ತಾರೆ 5 ನಿಮಿಷ, 10 ನಿಮಿಷ ಎಂದು ಉತ್ತರ ನೀಡುತ್ತಾರೆ.
ಇವರಿಗೆ ಕ್ವಾಟ್ರಸ್ ನಲ್ಲಿ ಉಳಿದುಕೊಳ್ಳಲು ಸರ್ಕಾರ ಸಾಲರಿ ನೀಡುತ್ತಿದೆಯಾ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.
ಈ ಹಿಂದೆ ಲೋಕೋಪಯೋಗಿ ಇಲಾಖೆಯ ಶ್ರೀ ಅರುಣ್ ಕುಮಾರ್ ರವರು ಅಂಬೇಡ್ಕರ್ ಫೋಟೋವನ್ನು ಯಾವುದೋ ಮೂಲೆಯಲ್ಲಿ ಬಿಸಾಡಿ, ಫೋಟೋ ಫಂಗಸ್ ನಿಂದ ಗಲೀಜ್ ಆಗಿತ್ತು,
ಹಲವು ತಿಂಗಳಿನಿಂದ ಮೂಲೆಯಲ್ಲಿ ಬಿದ್ದಿದ್ದ ಪೋಟೋವನ್ನು ದಲಿತ ಸಂಘರ್ಷ ಸಮಿತಿಯು ನೋಡಿ ಅರುಣ್ ಕುಮಾರ್ ಅವರ ವಿರುದ್ಧ ಪ್ರತಿಭಟನೆ ನಡೆಸಿ ತಹಶೀಲ್ದಾರ್ ಅವರಿಗೆ ಮನವಿಯನ್ನು ನೀಡಿದ್ದರು.
ಹೀಗೆ ಹಲವು ಕಾರಣಗಳಿಂದ ಬೇಜವಾಬ್ದಾರಿತನಕ್ಕೆ ಹೆಸರುವಾಸಿಯಾಗಿರುವ ಪಿಡಬ್ಲ್ಯೂಡಿ ಇಲಾಖೆ.
ಫೋಟೋಗೆ ಅವಮಾನ ಮಾಡಿದ ಸಹಾಯಕ ಇಂಜಿನಿಯರ್ ಅರುಣ್ ಕುಮಾರ್ ರವರು ಮತ್ತು ಸಿಬ್ಬಂದಿಯವರು ಒಂದಲ್ಲ ಒಂದು ಈ ರೀತಿ ಬೇಜವಾಬ್ದಾರಿತನಕ್ಕೆ ಹೆಸರುವಾಸಿ ಆಗುತ್ತಲೇ ಇದ್ದಾರೆ.
ಒಂದು ಕಡೆ ರಾಷ್ಟ್ರೀಯ ನಾಯಕರಿಗೆ ಅವಮಾನ ಮಾಡಿದರೆ ಮತ್ತೊಂದು ಕಡೆ ಕೆಲಸದಲ್ಲೂ ಬೇಜವಾಬ್ದಾರಿ.
ಇಂತಹ ಲೋಕೋಪಯೋಗಿ ಇಲಾಖೆಯ ಸಿಬ್ಬಂದಿಗಳ ವಿರುದ್ಧ ಸಂಬಂಧಪಟ್ಟ ಇಲಾಖೆಯವರು ಕ್ರಮಕೈಗೊಳ್ಳುವುದು ಅನಿವಾರ್ಯವಾಗಿದೆ.
ಮಂಜುನಾಥ್ ಗೋಡೆಕರ್
ಪ್ರಜಾ ಧ್ವನಿ ನ್ಯೂಸ್ ಸಿಂದಗಿ.

