ಸಿಂದಗಿಯಲ್ಲಿ ಅಂಬೇಡ್ಕರ್ ಕ್ರಾಂತಿಕಾರಿ | Chakravarthi Sulibele & Ex-Minister Mahesh | Praja Dhvani News

FEATUREDLATEST_NEWSCULTURELOCAL NEWSACTIVISM

12/1/20251 min read

ಸಿಂದಗಿ ನಗರದ ಮಾಂಗಲ್ಯ ಭವನದಲ್ಲಿ ಯುವ ಬ್ರಿಗೇಡ್ ಸಿಂದಗಿ ವತಿಯಿಂದ “ಹೊಸ ಬೆಳಕು – ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಕ್ರಾಂತಿಕಾರಿ ವಿಚಾರವಾದುಗಳ ಅನಾವರಣ” ಭಾವಪೂರ್ಣ ಹಾಗೂ ಭವ್ಯವಾಗಿ ಜರುಗಿತು.

ಕಾರ್ಯಕ್ರಮದಲ್ಲಿ ಯುವ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆಯವರು, ಮಾಜಿ ಶಿಕ್ಷಣ ಸಚಿವ ಎನ್. ಮಹೇಶ್ ರವರು, ಹಾಗೂ ಮಾಜಿ ಶಾಸಕ ರಮೇಶ್ ಭೂಸನೂರ್ ಹಾಜರಿದ್ದರು.

ಎನ್. ಮಹೇಶ್ ರವರು ಅಂಬೇಡ್ಕರ್ ಅವರ —
• ಬಾಲ್ಯ ಹೋರಾಟ
• ಚೌಡಯ್ಯನಕೆರೆ ಘಟನೆ
• ಪುನಾ ಒಪ್ಪಂದ
• ಸಂವಿಧಾನ ರಚನೆ ಹಾದಿ
• ಭಾರತದ ವಿಭಜನೆ ಮತ್ತು ಅಂಬೇಡ್ಕರ್ ಅವರ ಕೊನೆಯ ಭಾಷಣದ ಮಹತ್ವ ಇವೆಲ್ಲವನ್ನು ಜನಮನ ತಟ್ಟುವಂತೆ ವಿವರಿಸಿದರು.

ಚಕ್ರವರ್ತಿ ಸೂಲಿಬೆಲೆಯವರು ಬಿಡುಗಡೆ ಮಾಡಿದ 6 ಕ್ರಾಂತಿಕಾರಿ ಪುಸ್ತಕಗಳು ಅಂಬೇಡ್ಕರ್ ಧೋರಣೆಗಳು, ಅಸ್ಪೃಶ್ಯತೆ ವಿರುದ್ಧದ ಹೋರಾಟ, ಸಂವಿಧಾನ ತಿದ್ದುಪಡಿ ಇತಿಹಾಸ, ಹಾಗೂ ಭಾರತದ ಭವಿಷ್ಯಕ್ಕೆ ಅಂಬೇಡ್ಕರ್ ನೀಡಿದ ದೃಷ್ಟಿ — ಈ ಎಲ್ಲ ವಿಚಾರಗಳನ್ನೂ ತೀವ್ರತೆಯಿಂದ, ಸತ್ಯದಂತೆ ಪ್ರಸ್ತುತಪಡಿಸಿದರು.

📌 ವರದಿ: ಮಂಜುನಾಥ್ ಗೋಡೆಕರ್ ಪ್ರಜಾಧ್ವನಿ ನ್ಯೂಸ್ ಸಿಂದಗಿ.