ಈರುಳ್ಳಿ ರಸ್ತೆಗೆ ಚೆಲ್ಲಿ! ವಿಜಯಪುರದಲ್ಲಿ ರೈತರ ಹೋರಾಟ! | Basavana Bagewadi Protest | Praja Dhvani News

LATEST_NEWSVIJAYAPURACOMMUNITYLOCAL NEWSACTIVISM

11/30/20251 min read

ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿಯಲ್ಲಿ ಇಂದು ಭೀಕರ ರೈತರ ದಿಡೀರ್ ಪ್ರತಿಭಟನೆ ಜೋರಾಗಿ ಪ್ರಾರಂಭವಾಯಿತು!
ಈರುಳ್ಳಿ ಬೆಲೆಯ ದುರವಸ್ಥೆಯಿಂದ ಬೇಸತ್ತ ರೈತರು ಮಾರುಕಟ್ಟೆ ಬಂದ್ ಮಾಡಿ, ರಾಜ್ಯ ಹೆದ್ದಾರಿಯನ್ನೇ ತಡೆದು ಈರುಳ್ಳಿಯನ್ನು ರಸ್ತೆಗೆ ಚೆಲ್ಲಿ ತಮ್ಮ ಭಾರೀ ಆಕ್ರೋಶ ಹೊರಹಾಕಿದರು.

“ಕಿಂಟ್ವಳಿಗೆ 200–300 ರೂ.? ನಾವು ಹೇಗೆ ಬದುಕೋದು?” ಎಂದು ಗರ್ಜಿಸಿದ ರೈತರು ಸರ್ಕಾರ ಮತ್ತು ವ್ಯಾಪಾರಸ್ಥರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನಾ ಸ್ಥಳಕ್ಕೆ
👉 CPI ಗುರುಶಾಂತಗೌಡ ದಾಶ್ಯಾಳ
👉 ತಹಸೀಲ್ದಾರ ವೈ.ಎಸ್. ಸೋಮನಕಟ್ಟಿ
👉 APMC ಕಾರ್ಯದರ್ಶಿ ಅಲ್ಲಾಭಕ್ಷ ಜಾಪುರ ಹಾಜರಾಗಿ ರೈತರನ್ನು ಮನವೊಲಿಸಿದರು.

ರೈತ ಮುಖಂಡ ಕಲ್ಲು ಸೊನ್ನದ್ವರು ಸರ್ಕಾರಕ್ಕೆ ತೀವ್ರ ಎಚ್ಚರಿಕೆ ನೀಡುತ್ತಾ— “ಇದೇ ಪರಿಸ್ಥಿತಿ ಮುಂದುವರಿದ್ರೆ ಉಗ್ರ ಹೋರಾಟ ತಪ್ಪದು!” ಎಂದು ಘೋಷಿಸಿದರು.

ಈ ತೀವ್ರ ಪ್ರತಿಭಟನೆಯ ಸಂಪೂರ್ಣ ದೃಶ್ಯಾವಳಿ… ನಿಮ್ಮಗಾಗಿ Praja Dhwani News ಮೂಲಕ!

🎥 ವರದಿ: ರಮೇಶ್ ದಲ್ಲಾಳಿ
📡 Praja Dhwani News – Voice of the People!