ಕಟ್ಟಕಡೆ ಹಳ್ಳಿ ದುರವಸ್ಥೆ! MLAಗೆ ಅಭಿವೃದ್ಧಿ ಮನೆಯಷ್ಟೇ – ಮಕ್ಕಳ ಭವಿಷ್ಯ ಯಾರ ಜವಾಬ್ದಾರಿ? | Praja Dhvani News
INNOVATIONFEATUREDLATEST_NEWSCOMMUNITYLOCAL NEWSACTIVISM
ಬಸವನಬಾಗೇವಾಡಿ ತಾಲೂಕಿನ ಕಟ್ಟ ಕಡೆಯ ಹಳ್ಳಿಯಲ್ಲಿ ನಡೆಯುತ್ತಿರುವ ದುರವಸ್ಥೆ ಹೃದಯ ಕದಿಸುವ ಮಟ್ಟಕ್ಕೆ ಇದೆ.
127 ಮಕ್ಕಳು ಓದುತ್ತಿರುವ ಶಾಲೆಗೆ ಶಿಕ್ಷಕರ ಕೊರತೆ, ಶೌಚಾಲಯವಿಲ್ಲ, ಕುಡಿಯುವ ನೀರಿಲ್ಲ, ಕಾಂಪೌಂಡ್ ಗೆಟ್ ಇಲ್ಲ,
ಮೇಲ್ಚಾವಣಿ ಜಗ್ಗಿ ಮಕ್ಕಳ ಜೀವಕ್ಕೆ ಅಪಾಯ—
ಆದರೂ ಅಧಿಕಾರಿಗಳ ಕಿವಿಗೆ ಕೇಳುವುದೇ ಇಲ್ಲ!
ಚುನಾವಣೆಗೆ ಬಂದಾಗ ಮಾತ್ರ MLA, ನಾಯಕರು, ಅಧಿಕಾರಿಗಳು…
ಅದಾದ್ಮೇಲೆ ಹಳ್ಳಿ?
ಗೆದ್ದ್ಮೇಲೆ ಸಂಪೂರ್ಣ ಮೌನ!
MLA ಗಾಗೆ ಮನೆ ಡೆವಲಪ್, ಕಾರ್ ಡೆವಲಪ್,
ಆದ್ರೆ ಈ ಹಳ್ಳಿಗೆ ಅಭಿವೃದ್ಧಿಯ ಮರೀಚಿಕೆ!
ಶಾಲಾ ಶಿಕ್ಷಕರು ನಾವುಗಳಿಗೇ ಬಾಯ್ದೆರೆದು ಹೇಳುತ್ತಾರೆ:
“ಎಷ್ಟು ಬಾರಿ ಹೇಳಿದ್ರೂ ಶಿಕ್ಷಣಾಧಿಕಾರಿಗಳು ಗಮನ ಕೊಡಲ್ಲ!”
KRS ಪಕ್ಷದ ತಾಲ್ಲೂಕು ಅಧ್ಯಕ್ಷರ ಕಿಡಿ:
ವರ್ಷಗಳ ಸಮಸ್ಯೆ… ಯಾರಿಗೂ ನೋಡುವ ಆಸಕ್ತಿ ಇಲ್ಲ!
SDMC ಇಲ್ಲ… ಜವಾಬ್ದಾರಿ ಯಾರಿಗೋ ಗೊತ್ತಿಲ್ಲ…
BEO–HM ಮಾತುಗಳು ಕೂಡ ಪರಸ್ಪರ ವಿರುದ್ಧ!
ಹೀಗಾದ್ರೆ ಸುಳ್ಳು ಯಾರು ಹೇಳ್ತಾರೆ?
ಜನರ ಕಣ್ಣೀರಿಗೆ ಉತ್ತರ ಕೊಡುವವರು ಯಾರು!?
ಮಕ್ಕಳ ಭವಿಷ್ಯ ಯಾರ ಕೈಗೆ ಸಿಕ್ಕಿದೆ!?
ಸರ್ಕಾರಿ ಜವಾಬ್ದಾರಿ ಎಲ್ಲಿ ಕಳೆದು ಹೋಯ್ತು!?
ನಾವು Praja Dhwani News
ಈ ವಿಡಿಯೋವನ್ನು ಹೆಚ್ಚು ಜನರಿಗೆ ತಲುಪಿಸಿ…
ಈ ಹಳ್ಳಿಗೆ ನ್ಯಾಯ ಸಿಗಲಿ.

