ಸಿಂದಗಿ ಅಂಜುಟಗಿ ಆಸ್ಪತ್ರೆಯ Bio-Medical Waste ದುರವಸ್ಥೆ! | Praja Dhwani News Sindagi
LATEST_NEWSLOCAL NEWSCOMMUNITYFEATURED
ಸಿಂದಗಿ ನಗರದ ಹೃದಯ ಭಾಗದಲ್ಲಿರುವ ಅಂಜುಟಗಿ ಆಸ್ಪತ್ರೆಯಿಂದ ಬಯೋ-ಮೆಡಿಕಲ್ ವೇಸ್ಟ್ ಅನ್ನು ನಿಯಮಾನುಸಾರ ವಿಲೇವಾರಿ ಮಾಡದೆ ಎಲ್ಲೆಂದರಲ್ಲಿ ಬಿಸಾಡಲಾಗುತ್ತಿದೆ ಎಂಬ ಗಂಭೀರ ವಿಷಯವನ್ನು ಪ್ರಜಾ ಧ್ವನಿ ನ್ಯೂಸ್ ತಂಡ ಕಳೆದ ಒಂದು ತಿಂಗಳಿನಿಂದ ಗಮನಿಸುತ್ತಿತ್ತು.
ಸಿರೇಂಜ್, ರಕ್ತದಲ್ಲಿ ನೆನೆದ ಬ್ಯಾಂಡೇಜ್, POP ಪ್ಲಾಸ್ಟರ್, X-ray ಕಾಗದಗಳು — ಇಂತಹ ಅಪಾಯಕಾರಿ ಆರೋಗ್ಯ ಕಸವನ್ನು ಸಾರ್ವಜನಿಕ ಪ್ರದೇಶಗಳಲ್ಲಿ ಬಿಸಾಡಲಾಗುತ್ತಿರುವುದು ಜನರ ಆರೋಗ್ಯಕ್ಕೆ ನೇರ ಅಪಾಯ.
ಆಸ್ಪತ್ರೆ ಹಾಗೂ KPMPT ಏಜೆನ್ಸಿ ಪರಸ್ಪರ ಆರೋಪ ಮಾಡುತ್ತಿದ್ದರೂ, ಸಾರ್ವಜನಿಕ ಸುರಕ್ಷತೆ ದೊಡ್ಡ ಪ್ರಶ್ನೆಯಾಗಿದೆ. ಈ ಕುರಿತು ವಿಜಯಪುರ ಜಿಲ್ಲಾ ಆರೋಗ್ಯ ಅಧಿಕಾರಿಗಳು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.
ಪೂರ್ಣ ವರದಿ – ಮಂಜುನಾಥ್ ಗೋಡೆಕರ್ ಪ್ರಜಾಧ್ವನಿ ನ್ಯೂಸ್ ಸಿಂದಗಿ

