ಪಿ. ಯು. ಸಿ ಪರೀಕ್ಷೆಲ್ಲಿ ಕಲಾ ವಿಭಾಗಕ್ಕೆ ರಾಜ್ಯಕ್ಕೆ 5 ನೇ ರಾಂಕ್ "ಕುಮಾರಿ ಶ್ರೀಲತಾ"
EDUCATION
ಬಸವನ ಬಾಗೇವಾಡಿ ತಾಲೂಕಿನ ಕರಬಂಟನಾಳ ಗ್ರಾಮದ ರೈತ ನೀಲಕಂಠರಾಯ ಲಿಂಗರೆಡ್ಡಿ ಇವಳ ಮಗಳಾದ ಕುಮಾರಿ ಶ್ರೀಲತಾ ಪಿ. ಯು. ಸಿ ಪರೀಕ್ಷೆಲ್ಲಿ ಕಲಾ ವಿಭಾಗಕ್ಕೆ ರಾಜ್ಯಕ್ಕೆ 5 ನೇ ರಾಂಕ್ ಪಡೆದು ವಿಜಯಪುರ ಜಿಲ್ಲೆಗೆ ಹಾಗೂ ತಾನು ಕಲಿತ ಹೈಸ್ಕೂಲು ಹಾಗೂ ಕಾಲೇಜಿನ ಹಾಗೂ ಹೆತ್ತವರ ಕೀರ್ತಿ ಇಮ್ಮಡಿ ಗೊಳಿಸಿ ಎಲ್ಲ ವಿದ್ಯಾರ್ಥಿಗಳಿಗೆ ಸ್ಫೂರ್ತಿಯಾಗಿದ್ದಾಳೆ ಇದಕ್ಕೆ ಎಲ್ಲ ಕಡೆಯಿಂದ ಶುಭಾಶಯಗಳು ಹರಿದು ಬರುತ್ತಿವೆ ಇಂದು ಅವರ ಮನೆಗೆ ಹೂವಿನ ಹಿಪ್ಪರಗಿ ಭಾಗದ ಬಿ. ಜೆ.ಪಿ ಮುಖಂಡರಾದ ಕುಮಾರಗೌಡ ಪಾಟೀಲ್. ಹಣಮಂತ್ರಾಯ.ಗುಣಕಿ ಮಲ್ಲನಗೌಡ ನಾಡಗೌಡ. ಮಲ್ಲು ನಾಡಗೌಡ. ಶಾಂತಗೌಡ ಹಚಡದ ಶಿಕ್ಷಕರು ಹಾಗೂ ರಾಜು ಕುಂಟೋಜಿ.ನಿಂಗನಗೌಡ ಲಿಂಗರೆಡ್ಡಿ ಆಗಮಿಸಿ ಸಿಹಿ ತಿನಿಸಿ ಸನ್ಮಾನ ಮಾಡಿ ಶುಭ ಕೋರಿ ಮುಂದಿನ ವಿದ್ಯಾಭ್ಯಾಸಕ್ಕೆ ಹಾರೈಸಿದರು.

